ಸೋಮವಾರ, ಅಕ್ಟೋಬರ್ 17, 2016

ಉಚಿತ ಆರೋಗ್ಯ ಶಿಬಿರ

ಉಜಿರೆ ಶ್ರೀ ಧ.ಮಂ. ಪ.ಪೂ ಕಾಲೇಜಿನ ಎನ್‍ಎಸ್‍ಎಸ್ ಘಟಕವು ದ.ಕ.ಜಿ.ಪಂ ಉನ್ನತೀಕರಿಸಿದ ಸರ್ಕಾರಿ ಹಿ.ಪ್ರಾ ಶಾಲೆಯಲ್ಲಿ ಪ್ರಸಕ್ತ ಸಾಲಿನ ವಾರ್ಷಿಕ ವಿಶೇಷ ಶಿಬಿರವನ್ನು ಹಮ್ಮಿಕೊಂಡಿದೆ. ಶಿಬಿರದ ಪ್ರಯುಕ್ತ ದಿನಾಂಕ 19 ಅಕ್ಟೋಬರ್ ಬುಧವಾರದಂದು ಮಂಗಳೂರಿನ ಎ.ಜೆ ಶೆಟ್ಟಿ ಆಸ್ಪತ್ರೆಯ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವು ನಡೆಯಲಿದೆ. ಈ ಶಿಬಿರದಲ್ಲಿ ನೇತ್ರ ತಜ್ಞರು, ಚರ್ಮರೋಗ ತಜ್ಞರು, ಮೂಳೆ ತಜ್ಞರು, ಸ್ತ್ರೀ ರೋಗ ತಜ್ಞರು ಮತ್ತು ಸಾಮಾನ್ಯ ಕಾಯಿಲೆಗಳ ವೈಧ್ಯರು ಆಗಮಿಸಲಿದ್ದಾರೆ. ತಪಾಸಣಾ ಶಿಬಿರದಲ್ಲಿ ಔಷಧಿಗಳನ್ನು ಉಚಿತವಾಗಿ ವಿತರಿಸಲಾಗುವುದು. ಸಾರ್ವಜನಿಕರು ಶಿಬಿರದ ಸದುಪಯೋಗ ಪಡೆಯಲು ಕೋರಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ