ಸೋಮವಾರ, ಅಕ್ಟೋಬರ್ 17, 2016

 ಎನ್‍ಎಸ್‍ಎಸ್ ಶಿಬಿರಗಳು ಆದರ್ಶ ಬದುಕಿಗೆ ಮುನ್ನುಡಿಯಿದ್ದಂತೆ- ಎಂ ಶೈಲಜ

ವರ್ಷಂಪ್ರತಿ ನಡೆಸುವ ಎನ್‍ಎಸ್‍ಎಸ್ ಶಿಬಿರಗಳು ಆದರ್ಶ ಬದುಕಿಗೆ ಮುನ್ನುಡಿಯಿದ್ದಂತೆ ಎಂದು ಚಾರ್ಮಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಎಂ ಶೈಲಜ ಅಭಿಪ್ರಾಯಪಟ್ಟರು. ಅವರು ಇತ್ತೀಚೆಗೆ ಉಜಿರೆ ಶ್ರೀ ಧ.ಮಂ ಪ.ಪೂ ಕಾಲೇಜಿನ ರಾ.ಸೇ.ಯೋ ಘಟಕವು ಚಾರ್ಮಾಡಿಯ ದ.ಕ.ಜಿ.ಪಂ ಉನ್ನತೀಕರಿಸಿದ  ಶಾಲೆಯಲ್ಲಿ ಹಮ್ಮಿಕೊಂಡಿರುವ ಪ್ರಸಕ್ತ ಸಾಲಿನ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
    ಇಂದಿನ ದಿನಗಳಲ್ಲಿ ಕೇವಲ ಅಂಕ ಗಳಿಕಗೆ ಮಾತ್ರ ಉತ್ತೇಜನ ನೀಡಲಾಗುತ್ತಿದ್ದು ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳ ಭಾಗವಹಿಸುವಿಕೆಯ ಪ್ರಮಾಣ ಕಡಿಮೆಯಾಗುತ್ತಿದೆ. ಇದು ಭವಿಷ್ಯದಲ್ಲಿ ವಿದ್ಯಾರ್ಥಿಗಳಿಗೆ ತಮ್ಮ ಬದುಕನ್ನು ಯಶಸ್ವಿಯಾಗಿ ನಿರ್ವಹಿಸಲು ತೊಡಕಾಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ತಮ್ಮ ಓದಿನ ದಿನಗಳಲ್ಲಿ ದೊರೆಯುವ ಇಂತಹ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕರೆನೀಡಿದರು.
    ಶಿಬಿರವನ್ನು ಉದ್ಘಾಟಿಸಿದ ಉಜಿರೆ ಕ್ಷೇತ್ರದ ಜಿಲ್ಲಾ ಪಂಚಾಯತ್ ಸದಸ್ಯೆ ನಮಿತಾ ಕೆ ಮಾತನಾಡಿ ಎನ್ ಎಸ್‍ಎಸ್ ಶಿಬಿರಗಳು ಗ್ರಾಮಗಳ ಅಭಿವೃದ್ದಿಯಲ್ಲಿ ಮಹತ್ತರವಾದ ಪಾತ್ರವನ್ನು ವಹಿಸಿವೆ. ಶಿಬಿರದಲ್ಲಿ ಕೇವಲ ಶ್ರಮದಾನಕ್ಕೆ ಮಾತ್ರ ಒತ್ತು ನೀಡದೆ ಶೈಕ್ಷಣಿಕ, ಸಾಂಸ್ಕøತಿಕ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗಿದೆ ಗ್ರಾಮಸ್ಥರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
    ಶಾಲೆಯ ಎಸ್‍ಡಿಎಂಸಿ ಅಧ್ಯಕ್ಷೆ ಲಕ್ಷ್ಮೀ ಡಿ ರೇಬೀಸ್ ಕುರಿತು ಅರಿವು ಮೂಡಿಸುವ ಕರಪತ್ರವನ್ನು ಬಿಡುಗಡೆಗೊಳಿಸಿದರು. ವೇದಿಕೆಯಲ್ಲಿ ಶ್ರೀ ಧ ಮಂ ಪಿ ಯು ಕಾಲೇಜಿನ ಪ್ರಾಂಶುಪಾಲ ಪ್ರೊ. ಎನ್ ದಿನೇಶ್ ಚೌಟ, ಎಸ್.ಡಿ.ಎಂ.ಸಿ ಉಪಾಧ್ಯಕ್ಷ ಯೋಗೀಶ್ ಪೂಜಾರಿ, ಚಾರ್ಮಾಡಿ ಗ್ರಾ.ಪಂ ಸದಸ್ಯರಾದ ಕೇಶವತಿ ಪಿ, ಉಮೇಶ್ ಗೌಡ, ಶಾಲಾ ಮುಖ್ಯೋಪಾಧ್ಯಾಯ ಕೃಷ್ಣಪ್ಪ ಗೌಡ, ಉಜಿರೆ ಎಸ್‍ಡಿಎಂ ಆಂಗ್ಲಮಾಧ್ಯಮ ಶಾಲಾ ಮುಖ್ಯೋಪಾಧ್ಯಾಯ ಮನಮೋಹನ ನಾಯ್ಕ್, ಧರ್ಮಸ್ಥಳ ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಸೋಮಶೇಖರ ಶೆಟ್ಟಿ, ಮಾತನಾಡಿ ಶುಭಹಾರೈಸಿದರು.
ಶಿಬಿರಾಧಿಕಾರಿಗಳಾದ ನಾಗರಾಜ್ ಬಂಢಾರಿ, ಪ್ರೀತಲ್ ಕುಮಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸ್ವಯಂಸೇವಕರಾದ ಮಣಿಕಂಠ ಸ್ವಾಗತಿಸಿ, ಮಧುರ ವಂದಿಸಿದ ಕಾರ್ಯಕ್ರಮವನ್ನು ಕಾವ್ಯಶ್ರೀ ನಿರೂಪಿಸಿದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ