ಬುಧವಾರ, ಸೆಪ್ಟೆಂಬರ್ 28, 2016

ನವೆಂಬರ್ 18, 19 ಮತ್ತು 20 ಆಳ್ವಾಸ್ ನುಡಿಸಿರಿ – 2016


ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ನಡೆಯುವ ಕನ್ನಡ ನಾಡು-ನುಡಿ-ಸಂಸ್ಕೃತಿಯ ರಾಷ್ಟ್ರೀಯ ಸಮ್ಮೇಳನ ಆಳ್ವಾಸ್ ನುಡಿಸಿರಿ ಯು ನವೆಂಬರ್ ತಿಂಗಳ 18, 19 ಮತ್ತು 20 (ಶುಕ್ರವಾರ, ಶನಿವಾರ ಮತ್ತು ಭಾನುವಾರ) ರಂದು ’ಕರ್ನಾಟಕ : ನಾಳೆಗಳ ನಿರ್ಮಾಣ’ ಎಂಬ ಪ್ರಧಾನ ಪರಿಕಲ್ಪನೆಯಲ್ಲಿ ಮೂರು ದಿನಗಳ ಕಾಲ ಮೂಡಬಿದಿರೆಯ ವಿದ್ಯಾಗಿರಿಯಲ್ಲಿರುವ ರತ್ನಾಕರವರ್ಣಿ ವೇದಿಕೆಯಲ್ಲಿ ವಿಜೃಂಭಣೆಯಿಂದ ಜರುಗಲಿದೆ. ನವಂಬರ್ ೧೮ ಶುಕ್ರವಾರದಂದು ಬೆಳಿಗ್ಗೆ ಉದ್ಘಾಟನಾ ಸಮಾರಂಭವು ನಡೆಯಲಿದ್ದು, ನವಂಬರ್ ೨೦ರಂದು ಅಪರಾಹ್ನ ನುಡಿಸಿರಿ ಸಮ್ಮೇಳನವು ಸಂಪನ್ನಗೊಳ್ಳಲಿದೆ. ಸಮ್ಮೇಳನದ ಯಶಸ್ಸಿಗಾಗಿ ಸಿದ್ಧತೆಗಳು ನಡೆಯುತ್ತಿವೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ